ಕಥಾಖಂಡ | ವಿಜಯಾ ಕಾಲೇಜು, ಬೆಂಗಳೂರು

ವಿಜಯಾ ಕಾಲೇಜು ಅರ್ಪಿಸುತ್ತಿರುವ ನಾಟಕ ಕಥಾಖಂಡ, ಹೆಸರೇ ಸೂಚಿಸುವಂತೆ ಪ್ರಪಂಚದ ಆರು ಖಂಡಗಳಿಂದ ಆಯ್ದ ಕಥೆಗಳನ್ನು ಕನ್ನಡದಲ್ಲಿ ಪಸರಿಸುವ ಪ್ರಯೋಗ. ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ನಾಟಕವನ್ನು ಮೊದಲು ಬರೆದದ್ದು. ನಮ್ಮ ಸಂಸ್ಕೃತಿಯ ಹಾಗೂ ಸಾಹಿತ್ಯಕ್ಕೂ ಅಂತರರಾಷ್ಟ್ರೀಯ ಸಾಹಿತ್ಯಕ್ಕೂ ಇರುವ ಹೋಲಿಕೆ ನಮಗೂ ಮತ್ತು ಈ ಪ್ರಯೋಗದ ಸಹಭಾಗಿಗಳೆಲ್ಲರಿಗೂ  ಆಶ್ಚರ್ಯ ತಂದಿದ್ದು ನಿಜ. ವಸುದೈವ ಕುಟುಂಬದ ನಿಜ ಪರಿಚಯ ಮಾಡಿಸುವ ಈ ಆರು ಕಥೆಗಳ ಸಂಗ್ರಹವೇ, ಕಥಾಖಂಡ ನಾಟಕ.

Kathakanda presents a bouquet of six short stories selected from six continents & presented in Kannda for audiences. 

Links:
ತಾಂತ್ರಿಕ ವರ್ಗ
ವಿನ್ಯಾಸ | ನಿರ್ದೇಶನ: ಪಿ. ಡಿ. ಸತೀಶ್ ಚಂದ್ರ
ರಚನೆ | ರಂಗರೂಪ: ಚಂದನ್ ಶಂಕರ್
ಸಂಗೀತ ಸಂಯೋಜನೆ: ನಿಖಿಲ್ ಪಾರ್ಥಸಾರಥಿ
ಸಹನಿರ್ದೇಶನ: ಶ್ರಿಹರಿ ಕಶ್ಯಪ್, ಚಂದನ್ ಶಂಕರ್, ಸಂತೋಷ್ ಕರ್ಕಿ, ನಾಗರಾಜ್ ವೆಂಕಟೇಶಪ್ಪ
ಬೆಳಕು ನಿರ್ವಹಣೆ: ವಿಜಯಕುಮಾರ್ ಪಾಂಡವಪುರ
ಸಂಗೀತ ನಿರ್ವಹಣೆ: ಭುವನ್ ರಾವ್
ಗಾಯಕರು: ಚೈತ್ರ . ಯು. ಮತ್ತು ಸ್ಪಂದನ ಕೃಷ್ಣರಾಜ್
ರಂಗಸಜ್ಜಿಕೆ ಹಾಗೂ ವಸ್ತ್ರವಿನ್ಯಾಸ: ಯಶಸ್ವಿನಿ L, ಪ್ರಿಯಾಂಕ V, ಹರ್ಶಿತ S, ಗಗನ M, ಸುಹಾಸ್, ಲಿಕಿತ್, ಮನೋಕಾಮ್ನಾ, ಮನೋಜ್, ರೇವಂತ್, ಯಶಸ್, ತೇಜಸ್, ಹರ್ಷ ವರ್ದನ್ N
ಭಿತ್ತಿಚಿತ್ರ: ಯಶಸ್ವಿನಿ L
ಕಾಲೇಜು ಸಂಯೋಜನಾ ಸಹಕಾರ: ಪ್ರೊ. ಡಿ ಆರ್ ಸುಧಾ, ಪ್ರೊ. ಆರ್ ಆರ್ ಲಕ್ಷ್ಮಿ, ಪ್ರೊ. ಗಣೇಶ ಭಟ್, ದೇವರಾಜ್

ಪಾತ್ರವರ್ಗ
ಲಿಖಿತ್ ಕುಮಾರ್ - ಸೂತ್ರಧಾರ, ಶೇನ್,ಪ್ರಜೆ, ವ್ಯಾಪಾರಿ, ಪ್ಲೇಯರ್, ಗಿಡ, ಬಿಲ್ಲಿ
ಭಾನುಶ್ರೀ. ಆರ್ - ಡಾಕ್ಟರ್, ಜ್ಯಾನೆಟ್, ಪ್ರಜೆ, ಗಿಡ, ಜಾನೆಟ್, ಮಕ್ಳು 
ಪೃಥ್ವಿ. ವಿ - ಕಿಟಿಕ್ಪಾ, ಪಿಶಾಚಿ, ಡಾಕ್ಟರ್, ಪ್ಲೇಯರ್, ಮನೆ, ಗೋಡೆ
ಚೈತ್ರ ರೆಡ್ಡಿ - ಲೇಡಿ ಸ್ಕಂಕ್, ಜನ, ಪ್ರಜೆ, ಗಿಡ, ಪ್ಲೇಯರ್, ಮಕ್ಳು 
ಚಂದು. ಕೆ. ಆರ್ - ತಾರಸ್, ಡೇವಿಡ್, ಹೆನ್ರಿ, ಲಿಟ್ಲ್ ಸ್ಕಂಕ್, ಜನ, ಮಕ್ಳು
ಸ್ಪಂದನ. ಪಿ - ಸೂತ್ರಧಾರಿಣಿ, ಬೆಕಿ, ವ್ಯಾಪಾರ ದೇವತೆ, ಡೀಲರ್, ಪ್ರಜೆ, ಮನೆ
ವಿಶಾಲ್. ಎಲ್ - ಐವನ್, ಜ್ಯೂಲಿಯಸ್, ಜಿಮ್, ಗಿಡ, ಜನ, ಮನೆ
ಹರ್ಷ. ಎಸ್ - ಬೆನ್, ರಾಬರ್ಟ್, ಪಿಶಾಚಿ, ಪ್ಲೇಯರ್, ಜನ, ಗಿಡ
ಅನಂತ ಆರ್ ರಾವ್ - ಭೂತಯ್ಯ, ಜಾಗ್ವಾರ್, ಇಮ್ಡಾದ್ ಖಾನ್, ಟಾಮ್ ಸಾಯರ್, ಗಿಡ, ಕಂಪನಿ ಮಾಲೀಕ
ಮಾನ್ಯಶ್ರೀ - ಎಲಿಟಾ, ಮಾ, ಡೀಲರ್, ಗಿಡ, ಮನೆ, ಮಕ್ಳು
ಚರಣ್. ಆರ್ - ಮ್ಯಾಕ್ಸ್, ಪ್ರಾಣಿ, ಪ್ರಜೆ, ಗಿಡ, ಜನ, ಮಕ್ಳು
ಸಾರಥಿ. ಜೆ - ಪ್ರಜೆ, ಬಲಿಪಶು, ಲಾಯರ್, ಮಕ್ಳು, ಪ್ರಾಣಿ
ರಾಹುಲ್ ಪಾಸ್ವಾನ್ -ಸೈಮನ್, ಜಾನ್ ವಿನ್ಸ್ಟನ್, ಗಿಡ, ಜನ, ಮಕ್ಳು
ಯಶವಂತ್ - ಪ್ರಜೆ, ಪೋಲೀಸ್, ಗಿಡ, ವ್ಯಾಪಾರಿ, ಗೋಡೆ

ನಿರ್ದೇಶಕರ ನುಡಿ: ಕಾಲೇಜು ದಿನಗಳಲ್ಲಿ ನಾಟಕಕ್ಕೆ ಧುಮುಕಿದ ನನಗೆ, ಕಾಲೇಜಿನ ಮಕ್ಕಳ ಜೊತೆ ಕೆಲಸಮಾಡುವುದು ಆಪ್ಯಾಯಮಾನವಾದ ಅನುಭವ. ಅವರ ಉತ್ಸಾಹ, ಉಮೇದಿನಿಂದ ನಮಗೆ ಸಿಗುವ positive vibes ಬೇರೆಲ್ಲೂ ಸಿಗುವುದಿಲ್ಲ. ಅದೂ ಅಲ್ಲದೆ ಅಡುಗೆ ಮಾಡಲು, ಮಣ್ಣಿನ ಮುದ್ದೆಯಿಂದ ಮಡಿಕೆ ಬಳಸುವುದಕ್ಕೂ, ಮಾರ್ಕೆಟ್ಟಿನಿಂದ ತಂದ ಮಡಿಕೆಯ ಬಳಸುವುದಕ್ಕೂ ವ್ಯತ್ಯಾಸವಿದೆ. ಮುಗ್ಧ ಮನಸ್ಸಿನ ಮಕ್ಕಳಿಗೆ, ಕೊಂಚ ಶಿಸ್ತು ಸಂಯಮದ ದಾರಿ ತೋರಿಸಿದರೆ ಅವರು  ನಮ್ಮನ್ನೂ ಮೀರಿಸುವ ರಂಗಕರ್ಮಿಗಳಾಗುತ್ತಾರೆ ಎನ್ನುವುದು ನನ್ನ ಬಹಳ ವರ್ಷಗಳ ವಾದ. ಅದಕ್ಕೆ ತಕ್ಕಂತೆ ಸಿಕ್ಕ ಈ ತಂಡಕ್ಕೆ, ಪ್ರಪಂಚದ ಸಾಹಿತ್ಯದ ಪರಿಚಯ ಮಾಡಿಸುವ ಕಥಾಖಂಡ ನಾಟಕವನ್ನು ಮಾಡಿಸುತ್ತಿರುವುದು ಅತೀವ ಹೆಮ್ಮೆಯ ವಿಷಯ. ಈ ಅನುಭವಕ್ಕೆ ಮತ್ತು ಅವಕಾಶಕ್ಕೆ ಸಾಕ್ಷೀಭೂತರಾದ ಎಲ್ಲರಿಗೂ ಮತ್ತು ಕಾಲೇಜಿನವರಿಗೂ ಅನಂತಾನಂತ ಧನ್ಯವಾದಗಳು.

ಕಾಲೇಜು ತಂಡದ ಬಗ್ಗೆ: ವಿಜಯರಂಗ ಕಲಾ ತಂಡ,  ವಿಜಯ ಕಾಲೇಜು, ಜಯನಗರ, ಬೆಂಗಳೂರು.

ವಿಜಯ ಕಾಲೇಜು ಜಯನಗರ ಪಠ್ಯ ಚಟುವಟಿಕೆಗಳಿಗೆ ಎಷ್ಟು ಪ್ರೋತ್ಸಾಹ ನೀಡುತ್ತಿದೆಯೋ ಪಠ್ಯೇತರ ಚಟುವಟಿಕೆಗಳಿಗೂ ಅಷ್ಟೇ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ.  ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯ, ನೃತ್ಯ ಹಾಗೇ ರಂಗ ಪ್ರಯೋಗಗಳಿಗೂ ಬೆಂಬಲಿಸುತ್ತಾ ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ 1999 ರಲ್ಲಿ ರಂಗಸೌರಭ ಎಂಬ ತಂಡ ಹುಟ್ಟುಕೊಂಡಿತು. ಆ ತಂಡದಿಂದ ಹೊಸ ಹೊಸ ರಂಗಪ್ರಯೋಗಗಳು ನಡೆದವು. ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಹೆಗ್ಗುರುತನ್ನು ಪಡೆಯಿತು. ರಂಗ ಸೌರಭ ದ ಅವಧಿಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ರಂಗ ಚಟುವಟಿಕೆಗಳು, ಬರಬರುತ್ತಾ ಮೊನಚು ಕಳೆದುಕೊಂಡು ಮಂಕಾಯಿತು. ನಂತರ ಸ್ತಬ್ಧವಾಯಿತು. 

ಇದೀಗ ದಶಕಗಳ ಸುದೀರ್ಘ ಮೌನದ ನಂತರ, ವಿಜಯ ಕಾಲೇಜಿನ ಅಂಗಳದಲ್ಲಿ ಮತ್ತೊಮ್ಮೆ ರಂಗಕಲರವ ಆರಂಭವಾಗಿದೆ. ಮತ್ತದೇ ಹುರುಪಿನೊಂದಿಗೆ, ಹುಮ್ಮಸ್ಸಿನೊಂದಿಗೆ ರಂಗ ಚಟುವಟಿಕೆ ಪುಟಿದೆದ್ದಿದೆ. ವಿಜಯರಂಗ ಕಲಾ ತಂಡ ಎಂಬ ಹೆಸರಿನಲ್ಲಿ ಮತ್ತೆ ರಂಗಪ್ರಯೋಗದ ಕಡೆ ಮುಖಮಾಡಿದೆ. ಅದರ ಪ್ರತಿಫಲವೇ 2023 ಫೆಬ್ರವರಿ 9 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ್ ಕಶ್ಯಪ್ ಅವರ ನಿರ್ದೇಶನದಲ್ಲಿ ತಯಾರಾಗಿ ಪ್ರದರ್ಶನಗೊಂಡ ಸೇವಂತಿ ಪ್ರಸಂಗ. ಈ ನಾಟಕ ನೋಡುಗರ ಮೆಚ್ಚುಗೆ ಪಡೆದದಲ್ಲದೆ, ವಿದ್ಯಾರ್ಥಿನಿ ಜ್ಯೋತಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು, ಪ್ರಸ್ತುತ ಪಿ.ಡಿ. ಸತೀಶ್ ಚಂದ್ರ ಅವರ ನಿರ್ದೇಶನದಲ್ಲಿ ಕಥಾಖಂಡ ನಾಟಕ ಪ್ರದರ್ಶನ ಗೊಳ್ಳುತ್ತಿದೆ. 

ಮೂಲ ಕಥೆಗಳ ವಿವರ | The select stories from each continent are:
1. AFRICA – ‘The Sacrificial Egg’ by Chinua Achebe: A Western-educated Igbo man, Julius, unwittingly breaks a sacrificial egg at a crossroads and becomes infected with a deadly epidemic that ravages his town and his fiancée.
2. ASIA – ‘Ivan the Fool’ by Leo Tolstoy: A generous and simple-minded peasant, Ivan, outwits the Old Devil and his three brothers, who seek wealth and power, by using his magical gifts to help others and live happily.
3. AUSTRALIA – 'A Gentleman's Agreement' by Elizabeth Jolley: A cunning and impoverished single mother tricks a wealthy and naive doctor into signing a contract that allows her and her children to live on his land for free, turning his peaceful property into a chaotic mess.
4. EUROPE - ‘The Wonderful Story of Henry Sugar’ by Roald Dahl: A selfish and greedy gambler learns to see without his eyes from a secret yoga manuscript and uses his newfound power to win money, until he decides to change his ways and help the poor.
5. SOUTH AMERICA – ‘The Jaguar and the Little Skunk’ a Mayan Folktale: A cunning and brave little skunk goes hunting with his godfather, the jaguar, and learns how to outsmart the bigger and stronger animals. 
6. NORTH AMERICA – ‘Tom Sawyer, Whitewashing the Fence’ by Mark Twain: A clever and mischievous boy, Tom, turns his punishment of painting a fence into a profitable and fun game, by tricking his friends into doing the work for him and paying him with their treasures.

Comments

  1. ಕಾತುರದಿಂದ ಕಾಯುತಿದ್ದೇನೆ, ನಾಟಕ ನೋಡಲು. ನಿಮಗೆಲ್ಲ ಶುಭವಾಗಲಿ

    ReplyDelete

Post a Comment